Tuesday 17 October 2017

ದೀಪಾವಳಿಗೆ ಪ್ರೇಕ್ಷಕರೆದುರು ಬರುತ್ತಿದ್ದಾನೆ 'ಸತ್ಯ ಹರಿಶ್ಚಂದ್ರ'


ಸಿನಿಮಾ ಡೆಸ್ಕ್ : ಕಾಮಿಡಿ ನಟ ಶರಣ್ ನಟನೆಯ 'ಸತ್ಯ ಹರಿಶ್ಚಂದ್ರ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಯೆಸ್..ಇದೇ ತಿಂಗಳು 20ರಂದು ರಾಜ್ಯದಾದ್ಯಂತ ಸತ್ಯ ಹರಿಶ್ಚಂದ್ರ' ರಿಲೀಸ್ ಆಗಲಿದೆ.
ರಾಜಕುಮಾರ ಅವರು 'ಸತ್ಯ ಹರಿಶ್ಚಂದ್ರ' ಹೆಸರಿನ ಸಿನಿಮಾ ಮಾಡಿದ್ದಾರೆ. ಈಗ ಶರಣ್ ಕೂಡ ಅದೇ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಆ ಹಳೆಯ ಸಿನಿಮಾಗೂ ಈ ಸಿನಿಮಾಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ಧಾರೆ, ಅವರಿಗೆ ಜೋಡಿಯಾಗಿ ಸಂಚಿತಾ ಪಡುಕೊಣೆ ಅಭಿನಯಿಸಿದ್ಧಾರೆ. ಚಿಕ್ಕಣ್ಣ, ಭಾವನ ರಾವ್, ಸಾಧುಕೋಕಿಲಾ, ಶರತ್ ಲೋಹಿತಾಶ್ವ ಸೇರಿದಂತೆ ಮುಂತಾದವರು ಅಭಿನಯಿಸಿದ್ಧಾರೆ. ಈ ಸಿನಿಮಾವನ್ನು ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ಧಾರೆ. ಹಾಗೇಯೆ ಕೆ.ಮಂಜು ನಿರ್ಮಿಸಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

No comments:

Post a Comment