Tuesday 17 October 2017

ಚಿರು ಹುಟ್ಟು ಹಬ್ಬದ ವಿಶೇಷ : 'ಸಂಹಾರ' ಟ್ರೇಲರ್ ರಿಲೀಸ್


ಸಿನಿಮಾ ಡೆಸ್ಕ್ : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾಗೆ ಇದು ಹುಟ್ಟು ಹಬ್ಬದ ಸಂಭ್ರಮ. ಚಿರು ಹುಟ್ಟು ಹಬ್ಬದ ದಿನದಂದೇ ಚಿರುವಿನ 'ಸಂಹಾರ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಗುರು ದೇಶಪಾಂಡೆ 'ಸಂಹಾರ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅಂಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಲಿದ್ದಾರೆ. ಜೊತೆಗೆ ಚಿಕ್ಕಣ್ಣ, ಕಾವ್ಯಾ ಶೆಟ್ಟಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಚಿಕ್ಕಣ್ಣ ಕಾಣಿಸಿಕೊಂಡಿದ್ದು, ಚಿಕ್ಕಣ್ಣ ಪಾತ್ರದ ಬಗ್ಗೆ ಬಹಳ ಕ್ಯುರಿಯಾಸಿಟಿ ಹುಟ್ಟಿದೆ. ಆಯಕ್ಷನ್ ಸಿನಿಮಾವಾಗಿರುವ ' ಸಂಹಾರ' ಮುಂದಿನ ತಿಂಗಳಲ್ಲಿ ರಿಲೀಸ್ ಆಗಲಿದೆ. ರವಿ ಬಸ್ರೂರ್ ಸಂಗೀತ ಈ ಸಿನಿಮಾಕ್ಕಿದೆ. ಹಾಗೂ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಅದೇನೆ ಇರಲಿ ಸಂಹಾರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಯಾವ ಲೆವೆಲ್ ಗೆ ಸದ್ದು ಮಾಡುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.

No comments:

Post a Comment